ಸಂಗಮ ಕನ್ನಡ ಸಂಘ / Sangama, St. Louis

Sangama

Sumadhura Sangama

ಭಾವಪೂರ್ಣ ಸಂಗೀತ ಸಂಜೆ  “ಸುಮಧುರ ಸಂಗಮ” ಕಾರ್ಯಕ್ರಮವು ನಿಜಕ್ಕೂ ಸಂಗೀತದ ವ್ಯಭವವನ್ನು ಪ್ರತಿಬಿಂಬಿಸಿದ ಒಂದು ಅದ್ಭುತ ಸಂಜೆ ಆಗಿತ್ತು.  ನಮ್ಮವರೇ ಆದ ಪ್ರತಿಭಾನ್ವಿತ ಸ್ಥಳೀಯ ಗಾಯಕರಾದ ಗುರು ಸಂಧ್ಯಾ ಪಾಂಡುರಂಗಿ, ಗುರು ಸೀಮಾ ಕಸ್ತೂರಿ ಹಾಗು ಶ್ರೀಮತಿ ನೀತಾ ಶಹಪೇಟಿ ಅವರು ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನ ಹಳೆಯ ಮತ್ತು ನವೀನ ಗೀತೆಗಳನ್ನು ಪ್ರಸ್ತುತ ಪಡಿಸಿ ಶ್ರೋತೃಗಳ ಮನಸ್ಸು ಗೆದ್ದರು.  ಭಾವನಾತ್ಮಕ ಗೀತೆಗಳಿಂದ ಹಿಡಿದು ಜೋಷ್ ತುಂಬಿದ ಹಾಡುಗಳವರೆಗೆ ಪ್ರತಿ ನಿರ್ವಹಣೆಯೂ ಪ್ರೇಕ್ಷಕರನ್ನು ಸಂಗೀತ ಲೋಕದಲ್ಲಿ ಆನಂದದಿಂದ ವಿಹರಿಸುವಂತೆ ಮಾಡಿತು. ಈ ಅದ್ಭುತ ಸಂಗೀತ ಸಂಜೆಗೆ ಜೀವವನ್ನು ನೀಡಿದವರು ನಮ್ಮ ಸ್ಥಳೀಯ ವಾದ್ಯಕಲಾವಿದರಾದ – ಗಿಟಾರ್ ವಾದಕರು ಡಾ. ನವೀನ ಕೃಷ್ಣ ಹಾಗೂ  ತಬಲಾ ವಾದಕರಾದ ಡಾ. ರಘು ಪಾಂಡುರಂಗಿ ಅವರು.  ಇವರಿಬ್ಬರೂ ತಮ್ಮ ನಾದದಿಂದ ಪ್ರತಿಯೊಂದು ಹಾಡಿಗೆ ಲಯದ ಹೊಳೆಯುಂಟು ಮಾಡಿದರು.  ಅವರ ಕಲಾತ್ಮಕತೆಯು ಪ್ರತಿ ಹಾಡಿಗೊ ಜೀವ ನೀಡಿತ್ತು. ಇವೆಲ್ಲದರ ಜೊತೆಗೆ ಸಿಹಿ ಒಬ್ಬಟ್ಟಿನಂತೆ ರುಚಿ ನೀಡಿದ್ದು, ನಮ್ಮ ಕರ್ನಾಟಕದಿಂದ ಬಂದ ವಾದಕರಾದ ಶ್ರೀ ಕೃಷ್ಣ ಆನಂದ್ ಮತ್ತು ಶ್ರೀ ವೀರೇಶ್ ರವರು.  ಇವರಿಬ್ಬರ ಸಂಗೀತ ಸಾಧನ ಅತ್ಯದ್ಭುತ.  ಇವರ ವಾದ್ಯ ವಾದನವನ್ನು ಆಸ್ವಾದಿಸಿದ ಪ್ರೇಕ್ಷಕರು ತನ್ಮಯ ಭಾವದಲ್ಲಿ ಮುಳುಗಿ ಹೋದರು. ಮತ್ತೊಂದು ಹೆಗ್ಗಳಿಕೆ ಎಂದರೆ ನಮ ಸಂಗಮದ ಪ್ರತಿಭಾನ್ವಿತ ಗಾಯಕರಾದ ಶ್ರೀಮತಿ ಛಾಯ ಗೋಪಾಲನ್ , ಶ್ರೀಮತಿ ಶುಭ ಭಾಸ್ಕರ್ ಹಾಗು ಶ್ರೀ ಹೇಮಂತ್ ಕುಮಾರ್ ರವರ ಕೋರಸ್ ವೃಂದ ಈ ಸಂಗೀತ ಸಂಜೆಗೆ ಮತ್ತಷ್ಟು ಮೆರಗು ನೀಡಿತು.  ಅವರ ಸಮರಸವಾದ ಗಾಯನವು ಮುಖ್ಯ ಗಾಯಕಿಯರ ಹಾಡುಗಳಿಗೆ ನೆರವಾಗಿದ್ದವು. ಕಾರ್ಯಕ್ರಮದ ನಿರೂಪಕಿ  ಶ್ರೀಮತಿ ಪದ್ಮಿನಿ ಪಟ್ಲು ಅವರ ಶಕ್ತಿ, ವರ್ಚಸ್ಸು ಮತ್ತು ಸ್ಪುಟವಾದ ಕನ್ನಡ  ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವಂತೆ ಮಾಡಿತು ಮತ್ತು ಕಾರ್ಯಕ್ರಮವು ಸುಗಮವಾಗಿ ನಡೆಯಿತು. ಈ ಸುಮಧುರ ಸಂಗೀತ ಸಂಜೆಯನ್ನು ಸುಸಜ್ಜಿತವಾಗಿ ನಡೆಸಲು ಕಾರಣೀಭೂತರಾದವರಿಗೆಲ್ಲರಿಗೂ ಅನಂತಾನಂತ ಧನ್ಯವಾದಗಳು. ನಮ್ಮ ಪ್ರತಿಭಾನ್ವಿತ ಸಂಗೀತಗಾರರ ಆತಿಥ್ಯ ವಹಿಸಿದ್ದಕ್ಕಾಗಿ ಶ್ರೀ ದತ್ತ ಚಂದ್ರಶೇಖರ್ ಅವರಿಗೆ ಧನ್ಯವಾದಗಳು. ಕಾರ್ಯಕ್ರಮಕ್ಕಾಗಿ ಸುಂದರವಾದ ಡಿಜಿಟಲ್ ಹಿನ್ನೆಲೆಗಳನ್ನು ವಿನ್ಯಾಸಗೊಳಿಸಿದ್ದಕ್ಕಾಗಿ […]

Sumadhura Sangama Read More »

೨೦೨೫ ತಂಧೆಯ ದಿನಾಚರಣೆ / 2025 Father’s Day Celebration

ವಿನೋದಭರಿತ ಆಚರಣೆ ವಿಶ್ವ ಅಪ್ಪಂದಿರ ದಿನಾಚರಣೆ ನಮ್ಮ ಜೀವನದ ನಿತ್ಯ ನಾಯಕರಾದ ತಂದೆಯಂದಿರಿಗೆ ಸಮರ್ಪಿತವಾದ ಹರ್ಷಭರಿತ ಮತ್ತು ಹೃದಯಸ್ಪರ್ಶಿ ಗೌರವಾಚರಣೆ ಆಗಿತ್ತು. ಈ ಕಾರ್ಯಕ್ರಮವು ತಾಜಾ ಮಸಾಲ ಮಜ್ಜಿಗೆ ಮತ್ತು ಕಲ್ಲಂಗಡಿ ಹಣ್ಣಿನಿಂದ ಪ್ರಾರಂಭವಾಗಿ, ಬೇಸಿಗೆ ಮಧ್ಯಾಹ್ನಕ್ಕೆ ತಣ್ಣನೆಯ ಅನುಭೂತಿ ನೀಡಿತು. ರುಚಿಕರವಾದ ಭೇಲ್ ಪುರಿ ಕ್ಷಣಾರ್ಧದಲ್ಲಿ ತಟ್ಟೆಗಳಿಂದ ಮಾಯವಾಗಿ, ಎಲ್ಲರ ಮುಖದಲ್ಲಿ ಆನಂದದ ಭಾವನೆ ಮೂಡಿಸಿತು. ಊಟದ ಜೊತೆಗೆ “ಮಿನಿಟ್ ಟು ವಿನ್ ಇಟ್” ಆಟವನ್ನು ಕೀರ್ತನಾ ಮತ್ತು ಶ್ವೇತಾರವರು ಉತ್ಸಾಹದಿಂದ ನಡೆಸಿದರು. ಸುತ್ತಲೂ ನಗು,

೨೦೨೫ ತಂಧೆಯ ದಿನಾಚರಣೆ / 2025 Father’s Day Celebration Read More »

Scroll to Top