ಭಾವಪೂರ್ಣ ಸಂಗೀತ ಸಂಜೆ
“ಸುಮಧುರ ಸಂಗಮ” ಕಾರ್ಯಕ್ರಮವು ನಿಜಕ್ಕೂ ಸಂಗೀತದ ವ್ಯಭವವನ್ನು ಪ್ರತಿಬಿಂಬಿಸಿದ ಒಂದು ಅದ್ಭುತ ಸಂಜೆ ಆಗಿತ್ತು. ನಮ್ಮವರೇ ಆದ ಪ್ರತಿಭಾನ್ವಿತ ಸ್ಥಳೀಯ ಗಾಯಕರಾದ ಗುರು ಸಂಧ್ಯಾ ಪಾಂಡುರಂಗಿ, ಗುರು ಸೀಮಾ ಕಸ್ತೂರಿ ಹಾಗು ಶ್ರೀಮತಿ ನೀತಾ ಶಹಪೇಟಿ ಅವರು ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನ ಹಳೆಯ ಮತ್ತು ನವೀನ ಗೀತೆಗಳನ್ನು ಪ್ರಸ್ತುತ ಪಡಿಸಿ ಶ್ರೋತೃಗಳ ಮನಸ್ಸು ಗೆದ್ದರು. ಭಾವನಾತ್ಮಕ ಗೀತೆಗಳಿಂದ ಹಿಡಿದು ಜೋಷ್ ತುಂಬಿದ ಹಾಡುಗಳವರೆಗೆ ಪ್ರತಿ ನಿರ್ವಹಣೆಯೂ ಪ್ರೇಕ್ಷಕರನ್ನು ಸಂಗೀತ ಲೋಕದಲ್ಲಿ ಆನಂದದಿಂದ ವಿಹರಿಸುವಂತೆ ಮಾಡಿತು.
ಈ ಅದ್ಭುತ ಸಂಗೀತ ಸಂಜೆಗೆ ಜೀವವನ್ನು ನೀಡಿದವರು ನಮ್ಮ ಸ್ಥಳೀಯ ವಾದ್ಯಕಲಾವಿದರಾದ – ಗಿಟಾರ್ ವಾದಕರು ಡಾ. ನವೀನ ಕೃಷ್ಣ ಹಾಗೂ ತಬಲಾ ವಾದಕರಾದ ಡಾ. ರಘು ಪಾಂಡುರಂಗಿ ಅವರು. ಇವರಿಬ್ಬರೂ ತಮ್ಮ ನಾದದಿಂದ ಪ್ರತಿಯೊಂದು ಹಾಡಿಗೆ ಲಯದ ಹೊಳೆಯುಂಟು ಮಾಡಿದರು. ಅವರ ಕಲಾತ್ಮಕತೆಯು ಪ್ರತಿ ಹಾಡಿಗೊ ಜೀವ ನೀಡಿತ್ತು.
ಇವೆಲ್ಲದರ ಜೊತೆಗೆ ಸಿಹಿ ಒಬ್ಬಟ್ಟಿನಂತೆ ರುಚಿ ನೀಡಿದ್ದು, ನಮ್ಮ ಕರ್ನಾಟಕದಿಂದ ಬಂದ ವಾದಕರಾದ ಶ್ರೀ ಕೃಷ್ಣ ಆನಂದ್ ಮತ್ತು ಶ್ರೀ ವೀರೇಶ್ ರವರು. ಇವರಿಬ್ಬರ ಸಂಗೀತ ಸಾಧನ ಅತ್ಯದ್ಭುತ. ಇವರ ವಾದ್ಯ ವಾದನವನ್ನು ಆಸ್ವಾದಿಸಿದ ಪ್ರೇಕ್ಷಕರು ತನ್ಮಯ ಭಾವದಲ್ಲಿ ಮುಳುಗಿ ಹೋದರು.
ಮತ್ತೊಂದು ಹೆಗ್ಗಳಿಕೆ ಎಂದರೆ ನಮ ಸಂಗಮದ ಪ್ರತಿಭಾನ್ವಿತ ಗಾಯಕರಾದ ಶ್ರೀಮತಿ ಛಾಯ ಗೋಪಾಲನ್ , ಶ್ರೀಮತಿ ಶುಭ ಭಾಸ್ಕರ್ ಹಾಗು ಶ್ರೀ ಹೇಮಂತ್ ಕುಮಾರ್ ರವರ ಕೋರಸ್ ವೃಂದ ಈ ಸಂಗೀತ ಸಂಜೆಗೆ ಮತ್ತಷ್ಟು ಮೆರಗು ನೀಡಿತು. ಅವರ ಸಮರಸವಾದ ಗಾಯನವು ಮುಖ್ಯ ಗಾಯಕಿಯರ ಹಾಡುಗಳಿಗೆ ನೆರವಾಗಿದ್ದವು.
ಕಾರ್ಯಕ್ರಮದ ನಿರೂಪಕಿ ಶ್ರೀಮತಿ ಪದ್ಮಿನಿ ಪಟ್ಲು ಅವರ ಶಕ್ತಿ, ವರ್ಚಸ್ಸು ಮತ್ತು ಸ್ಪುಟವಾದ ಕನ್ನಡ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವಂತೆ ಮಾಡಿತು ಮತ್ತು ಕಾರ್ಯಕ್ರಮವು ಸುಗಮವಾಗಿ ನಡೆಯಿತು.
ಈ ಸುಮಧುರ ಸಂಗೀತ ಸಂಜೆಯನ್ನು ಸುಸಜ್ಜಿತವಾಗಿ ನಡೆಸಲು ಕಾರಣೀಭೂತರಾದವರಿಗೆಲ್ಲರಿಗೂ ಅನಂತಾನಂತ ಧನ್ಯವಾದಗಳು.
ನಮ್ಮ ಪ್ರತಿಭಾನ್ವಿತ ಸಂಗೀತಗಾರರ ಆತಿಥ್ಯ ವಹಿಸಿದ್ದಕ್ಕಾಗಿ ಶ್ರೀ ದತ್ತ ಚಂದ್ರಶೇಖರ್ ಅವರಿಗೆ ಧನ್ಯವಾದಗಳು.
ಕಾರ್ಯಕ್ರಮಕ್ಕಾಗಿ ಸುಂದರವಾದ ಡಿಜಿಟಲ್ ಹಿನ್ನೆಲೆಗಳನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಮತ್ತು ಅತ್ಯಾಧುನಿಕ ದೃಶ್ಯಾವಳಿಗಳನ್ನು ನಿರ್ವಹಿಸಿದ್ದಕ್ಕಾಗಿ ಶ್ರೀ ವಿನು ಶರ್ಮಾ ಅವರಿಗೆ ಧನ್ಯವಾದಗಳು.
ಕೆಲವು ಹಿನ್ನೆಲೆಯಲ್ಲಿ ಬಳಸಲಾದ ಛಾಯಾಚಿತ್ರಗಳನ್ನು ಒದಗಿಸಿದ್ದಕ್ಕಾಗಿ ಶ್ರೀ ಕಿರಣ್ ಆಚಾರ್ಯ ಅವರಿಗೆ ಧನ್ಯವಾದಗಳು.
ಪ್ರಯಾಣ ಮತ್ತು ಲಾಜಿಸ್ಟಿಕ್ಸ್ ಅನ್ನು ನಿರ್ವಹಿಸಿದ್ದಕ್ಕಾಗಿ ಶ್ರೀ ಶ್ರೀರಾಮ್ ಶ್ರೀನಾಥ್ಅ ವರಿಗೆ ಧನ್ಯವಾದಗಳು.
ಸಂಗೀತಗಾರರು ಮತ್ತು ಗಾಯಕರ ಅಭ್ಯಾಸಕ್ಕಾಗಿ ಸ್ಥಳ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಿದ್ದಕ್ಕಾಗಿ ಡಾ. ನವೀನ್ ಕೃಷ್ಣ ಮತ್ತು ಡಾ. ಲಕ್ಷ್ಮಿ ನವೀನ್, ಡಾ. ರಘು ಪಾಂಡುರಂಗಿ ಮತ್ತು ಗುರು ಸಂಧ್ಯಾ ಪಾಂಡುರಂಗಿ ಹಾಗು ಶ್ರೀ ವಿನೋದ್ ಶೆಣೈ ಮತ್ತು ಶ್ರೀಮತಿ ಮಂಗಳಾ ಶೆಣೈ ದಂಪತಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಎಲ್ಲಾ ಕಲಾವಿದರಿಗೆ ರಾತ್ರಿಯ ಭೋಜನವನ್ನು ಒದಗಿಸಿದ್ದಕ್ಕಾಗಿ ಶ್ರೀ ನಾಗೇಂದ್ರ ಸಂಜೀವ ಮತ್ತು ಶ್ರೀಮತಿ ಅನಿತಾ ನಾಗೇಂದ್ರ, ಶ್ರೀ ಗಿರೀಶ್ ದೀಕ್ಷಿತ್ ಮತ್ತು ಶ್ರೀಮತಿ ಶ್ರುತಿ ದೀಕ್ಷಿತ್ ಮತ್ತು ಶ್ರೀ ಟಿ ವಿ ವೆಂಕಟೇಶ್ ಮತ್ತು ಶ್ರೀಮತಿ ಗಾಯತ್ರಿ ವೆಂಕಟೇಶ್ ದಂಪತಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಕಾರ್ಯಕ್ರಮದ ಅಮೋಘ ಕ್ಷಣಗಳನ್ನು ತಮ್ಮ ಕ್ಯಾಮೆರಾ ದಲ್ಲಿ ಸೆರೆಹಿಡಿದ ಶ್ರೀ ಮೋಹನ್ ಹೆಬ್ಬಾರ್, ಕುಮಾರಿ ಅಂಕಿತ ಪಾಂಡುರಂಗಿ ಮತ್ತು ಕುಮಾರಿ ಅಮೂಲ್ಯ ಪಾಂಡುರಂಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
A Fun Filled Evening
“Sumadhura Sangama” was a true celebration of music, culture and community spirit. The evening was brought to life by our three incredibly talented singers from Saint Louis – Guru Sandhya Pandurangi, Guru Seema Kasturi and Smt. Neeta Shahapeti. They captivated the audience with their soulful renditions of Sandalwood and Bollywood classics. From timeless melodies to high-energy dance numbers, every performance struck a chord with the audience, creating a vibrant and nostalgic atmosphere.
What made the evening even more magical was the presence of live music by very talented Sri. Krishna Anand and Sri Veeresh. Adding depth and soul to the night were our own gifted musicians of Sangama – the guitarist Dr. Naveen Krishna whose strings added warmth and harmony, and the Tabla player Dr. Raghu Pandurangi whose beats brought rhythm and richness to every song. Their artistry elevated each performance, making the music come alive in the most beautiful way.
Equally enriching was the contribution of our three talented chorus singers, Smt. Chaya Gopalan, Smt. Shuba Bhaskar and Sri. Hemant Kumar, whose subtle harmonies and background vocals gave every song a fuller, more immersive feel. Their voices blended seamlessly, supporting the lead singers and adding emotional layers that enhanced the overall musical experience.
An evening enjoyed immensely by the audience as expressed by the non-stop cheering and dancing seen on the floor.
Our emcee Smt. Padmini Patlu’s energy, charisma, and seamless flow kept the audience engaged and the event running smoothly. There are many volunteers who worked very hard to make this event successful. On behalf of Sangama, we cordially thank each and every one of you.
There are many volunteers who worked very hard to make this event successful. On behalf of Sangama, we cordially thank
- Mr. Datta Chandrashekar for graciously hosting our talented musicians. Datta’s hospitality made them feel welcome and comfortable.
- Mr. Vinu Sharma for designing beautiful digital backgrounds for the event and handling the AV.
- Mr. Kiran Acharya for providing the photographs used in some of the backgrounds.
- Mr. Sreeram Sreenath for handling the commute and logistics.
- Dr. Naveen Krishna and Dr. Lakshmi Naveen for hosting a practice session at their residence.
- Dr. Raghu Pandurangi and Guru Sandhya Pandurangi for hosting practice sessions at their residence.
- Mr. Vinod Shenoy and Mrs. Mangala Shenoy for hosting a practice session at their residence
- Mr. Nagendra Sanjeeva and Mrs. Anitha Nagendra for providing dinner for the artists.
- Mr. Girish Dixit and Mrs. Shruthi Dixit for providing dinner for artists.
- Mr. T V Venkatesh and Mrs. Gayathri Venkatesh for providing dinner for the artists.
- Mr. Mohan Hebbar and Kum. Amoolya Pandurangi for capturing moments with their cameras.
- Kum. Ankita Panduragi for videography.
- All the volunteers who helped with stage decoration and many other logistics.
